namana visitor counter

Saturday, September 18, 2010

" ಏಕಾದಶಾನನ "(ರಾವಣನ ಹನ್ನೊಂದನೆಯ ಮುಖ!!)










" ಏಕಾದಶಾನನ "
(ರಾವಣನ ಹನ್ನೊಂದನೆಯ ಮುಖ!!)

ಅದ್ಬುತ ರಂಗ ಸಜ್ಜಿಕೆಯೊಂದಿಗೆ ಆಳ್ವಾಸ್ ವಿದ್ಯಾರ್ಥಿಗಳ ಅಭಿನಯದ ಮೂಲಕ ರಾವಣನ ಹನ್ನೊಂದನೆಯ ಮುಖವನ್ನು ತೆರೆದಿಡುವ " ಏಕಾದಶಾನನ "ಎಂಬ ಕಥಾನಕವು ನಾಟಕ ರೂಪದಲ್ಲಿ ಪ್ರದರ್ಶನಗೊಂಡು ರಾವಣನ ಹನ್ನೊದನೆಯ ಮುಖವನ್ನು ಅನಾವರಣಗೊಳಿಸಿದೆ.
ಮೂಡಬಿದಿರೆ ಆಳ್ವಾಸ್ ಪ್ರತಿಷ್ಟಾನದ ಅದ್ಯಕ್ಷ ಕಲಾ ಆರಾಧಕ ಡಾ.ಎಂ.ಮೋಹನ್ ಆಳ್ವ ಅವರ ಹಿರಿತನದಲ್ಲಿ ಸಂಸ್ಥೆಯ ವಿಧ್ಯಾರ್ಥಿಗಳು ನಾಟಕ ರಂಗ ಭೂಮಿಗೆ ನೀಡಿದ ಈ ಕೊಡುಗೆ ನಿಜಾವಾಗಿಯೂ ಹೆಚ್ಹಿನ ಜನರಿಗೆ ತಿಳಿದಿರದ ಸತ್ಯವನ್ನು ತೆರೆದಿಟ್ಟಿತು.ಮೂವತ್ತು ನಿಮಿಷಗಳಲ್ಲಿ ಮೂಡಿ ಬಂದ ಈ ಕಥಾ ವಸ್ತುವಿನಿಂದ ಹೊರ ಹೊಮ್ಮಿದ ಸಂದೇಶ ರಾವಣ ಕ್ರೂರಿಯಾದರೂ ಆತನ ಹೃದಯ ಶ್ರೀಮಂತಿಕೆ ಏನೆಂಬುದನ್ನು ಸಾರಿತ್ತು.
ಮೂಲ ವೇದ ವ್ಯಾಸ ರಾಮಾಯಣದ ಸಣ್ಣ ಉಪ ಕಥೆಯೊಂದನ್ನಾಧರಿಸಿ ಯುವ ವಕೀಲ,ಬರಹಗಾರ ಶಶಿರಾಜ್ ರಾವ್ ಕಾವೂರು ನಾಟಕ ಕೃತಿಯನ್ನಾಗಿಸಿದ್ದಾರೆ.ಬಹುಜನರಿಗೆ ತಿಳಿದಿಲ್ಲದ ರಾವಣನ ಹನ್ನೊಂದನೇ ಮುಖವನ್ನು ಮನ ಮಿಡಿಯುವಂತೆ ನಿರ್ದೇಶನದ ಮೂಲಕ ವಿದ್ಯಾರ್ಥಿಗಳ ಮೂಲಕ ವಿದ್ಯಾರ್ಥಿಗಳ ಅಭಿನಯದ ಮೂಲಕ ಹೊರ ಹೊಮ್ಮಿಸಿದವರು ರಂಗ ನಿರ್ದೇಶಕ ಜೀವನರಾಂ ಸುಳ್ಯ.

ಕಥಾ ಸಾರಾಂಶ:-
ರಾವಣ ಸಂಹಾರದ ನಂತರ ಶ್ರೀ ರಾಮ ಪಟ್ಟಾಭಿಷೆಕದ ತಯಾರಿ ನಡೆಯುತ್ತಿರಲು ರಾಮನು ಏಕ ಮನಸ್ಕನಾಗಿ ಕುಳಿತ್ತಿದ್ದಾಗ ಕೌಸಲ್ಯೆಯು ಮಗನನ್ನು ಕಂಡು ರಾವಣನನ್ನು ದೂಷಿಸುತ್ತ ಇಷ್ಟೆಲ್ಲಾ ರಾಮಾಯಣ! ನಡೆಯಲು ಅವನೇ ಕಾರಣ ಎನ್ನುವಾಗ ರಾಮನು ರಾವಣನನ್ನು ಹೊಗಳುತ್ತಾ ರಾವಣನ ಹನ್ನೊಂದನೆಯ ಮುಖವನ್ನು ಬಣ್ಣಿಸುವ ಹಿನ್ನೆಲೆ ದೃಶ್ಯಗಳಿಂದ ಕಥೆಯ ಆರಂಭ.

ಲಂಕೆಯಲ್ಲಿ ಶ್ರೀ ರಾಮಚಂದ್ರ ರಾವಣರ ಅಂತಿಮ ಯುದ್ದದ ಸಂದರ್ಬದಲ್ಲಿ ಆಗಸ್ಯ ಮುನಿಗಳ ಸಲಹೆಯಂತೆ "ಶ್ರೀ ರಾಮ ರಕ್ಷಾ ಹೋಮ"ಮಾಡಿದರೆ ಮಾತ್ರ ನಿನಗೆ ಜಯ ಎನ್ನಲು ರಾಮನು ಹೋಮ ನಡೆಸಲು ನಿರ್ದರಿಸುತ್ತಾನೆ.
ಆದರೆ ಹೋಮದ ಪೌರೋಹಿತ್ಯ ವಹಿಸಲು ಸೂಕ್ತ ಪುರೋಹಿತನ ಕೊರತೆ ಲಂಕಾ ಪಟ್ಟಣದಲ್ಲಿರುತ್ತದೆ,ಕಪಿ ಸೈನ್ಯವನ್ನು ಕಳುಹಿಸಿ ಇಡೀ ಲಂಕೆನ್ನೇ ಜಾಲಾಡಿಸಿದರೂ ಸಕಲ ವೇದ ಪಾರಂಗತನಾದ ದಶಕಂಠ ರಾವಣನನ್ನು ಹೊರತು ಪಡಿಸಿ ಬೇರಾರಿಗೂ ಈ ಹೋಮ ನಡೆಸುವ ಅರ್ಹತೆ ಇಲ್ಲ ಎಂಬ ಸತ್ಯ ತಿಳಿಯುತ್ತದೆ,ಆಗಸ್ಯ ಮುನಿಗಳ ಅಪೇಕ್ಷೆಯಂತೆ "ಶ್ರೀ ರಾಮ ರಕ್ಷಾ ಹೋಮ"ನಡೆಸಲೇ ಬೇಕು,
ಪರಮ ವೈರಿಯನ್ನೇ ಪೌರೋಹಿತ್ಯಕ್ಕೆ ಆಹ್ವಾನಿಸುವುದೇ? ಅದು ಸಾದ್ಯವೇ?ಎಂಬ ಗೊಂದಲ ಮನದಲ್ಲಿ ಪುಳಕಿಸುತ್ತಿದ್ದರೂ ದೂತನಾಗಿ ಹನುಮಂತ ರಾವಣನ ಬಳಿ ಬಂದೇ ಬಿಡುತ್ತಾನೆ,ಈ ಹಿಂದೆ ಲಂಕೆಗೆ ಪ್ರವೇಶಿಸಿದಾಗ ಬಾಲಕ್ಕೆ ಕಿಚ್ಹು ಹಚ್ಹಿಸಿದ ರಾವಣ ಈ ಬಾರಿ ಏನು ಸಿಟ್ಟಾಗುವನೋ ?ಏನು ಆಥಿತ್ಯ ನೀಡುವನೋ? ಎಂಬ ತವಕದಲ್ಲಿರಲು 'ಅಥಿತಿ ದೇವೋಭವ"ಎಂಬಂತೆ ವರ್ತಿಸುವ ರಾವಣ,
ಹನುಮಂತನು ಮುನಿಗಳ ಅಪೇಕ್ಷೆಯಂತೆ "ಶ್ರೀ ರಾಮ ರಕ್ಷಾ ಹೋಮ"ದ ಪೌರೋಹಿತ್ಯ ವಹಿಸಲು ಭಿನ್ನವಿಸಿಕೊಂಡಾಗ ಸಂತೋಷದಿಂದ ಒಪ್ಪಿ ಆಗಮಿಸುವ ರೋಮಾಂಚಕ ಸನ್ನಿವೇಶ ನಿಜವಾಗಿಯೂ ಅಭೂತಪೂರ್ವವಾಗಿತ್ತು.
ಇಷ್ಟರಲ್ಲಿಯೇ ಕೌತುಕದ ಶೃಂಗವೇರಿದ ಪ್ರೇಕ್ಷಕರ ಮನದಲ್ಲಿ ರಾವಣ ಬಂದು ಏನು ಮಾಡುತ್ತಾನೆ ಎಂಬ ಎಂಬ ಪ್ರಶ್ನೆ.ಹೋಮ ನಡೆಯುತ್ತಿದ್ದಂತೆ ಹೋಮ ಪೂರ್ಣವಾಗಬೇಕಾದರೆ ಶ್ರೀರಾಮಚಂದ್ರ ದಂಪತಿ ಸಮೇತವಾಗಿ ಹೋಮ ನಡೆಸಬೇಕು ಎಂಬ ಸಲಹೆ ನೀಡುತ್ತಾನೆ .ಆದರೆ ಸೀತಾ ಮಾತೆಯನ್ನು ಆ ಕ್ಷಣ ಎಲ್ಲಿಂದ ಕರೆತರಲು ಸಾದ್ಯ?ಅಶೋಕ ವನದಲ್ಲಿ ಬಂದಿಯಾಗಿರುವ ಸೀತೆಯನ್ನು ಪುರೋಹಿತ (ರಾವಣ ) ಕರೆತರಲು ಬಿಡುವನೆ? ಪುರೋಹಿತನ ಸಲಹೆ ಕಪಿ ಸೈನ್ಯವನ್ನು ಕೆರಳಿಸಲು,ಹೋಮ ಅರ್ದದಲ್ಲಿ ನಿಂತಿತಾದರೆ ಅದರ ದೋಷ ಹೋಮ ನಡೆಸಿದ ಶ್ರೀರಾಮಚಂದ್ರನಿಗೆ,
ಹೀಗಿರುವಾಗ ಮುಂದೇನು ಮುಂದೇನು ಆತಂಕದ ನಡುವೆ ಪುರೋಹಿತನು ಶಾಂತ ರೀತಿಯಲ್ಲಿ ಉದ್ಗರಿಸುತ್ತಾನೆ ಹೋಮದಲ್ಲಿ ಪಾಲ್ಗೊಳ್ಳಲು ಸೀತೆಯನ್ನು ಕರೆತರಲು ಹೋಮ ಮುಗಿದ ಬಳಿಕ ಸೀತೆಯನ್ನು ಅಶೋಕವನಕ್ಕೆ ಹಿಂತಿರುಗಿಸಬೇಕೆಂಬ ಷರತ್ತು ಬದ್ದ ಅನುಮತಿ ನೀಡುತ್ತಾನೆ.
ಅಂತೆಯೇ ಸೀತೆಯೇ ಆಗಮನವಾಗುತ್ತದೆ."ಶ್ರೀ ರಾಮ ರಕ್ಷಾ ಹೋಮ"ಸಾಂಗವಾಗಿ ನೆರವೇರುತ್ತದೆ.ಶ್ರೀ ರಾಮನಿಗೆ ಒಳಿತಾಗಲಿ ಎಂದು ಪುರೋಹಿತ ಹರಸುತ್ತಾನೆ!ನನ್ನನ್ನು ಗೆದ್ದ ನಂತರೆವೆ ಸೀತೆಯನ್ನು ಕರೆದುಕೊಂಡು ಹೋಗಬೇಕು ಷರತ್ತಿನಂತೆ ಸೀತೆ ಅಶೋಕ ವನವನ್ನು ಸೇರುತ್ತಾಳೆ.

ಹತ್ತು ತಲೆಯ ರಾವಣನು ಪೌರೋಹಿತ್ಯ ನಡೆಸಲು ಒಪ್ಪಿ ತನ್ನ ಒಂಬತ್ತು ತಲೆಗಳನ್ನು ಕಳಚಿ ಬರುವಂತಹ ದೃಶ್ಯಾವಳಿ,ಬಳಿಕ ಬ್ರಾಹ್ಮಣ ವಟುವಾಗಿ ಬರುವಂತಹ ಮೃದುತ್ವ,ಸೀತೆಯ ಆಗಮನ,ಹೋಮದಲ್ಲಿ ಮೊಳಗಿದ ಜಪ ಮಂತ್ರ ಘೋಷಗಳು ನಾಟಕದುದ್ದಕ್ಕೂ ನೈಜ್ಯತೆಯ ಶೈಲಿಯಲ್ಲಿಯೇ ಮೂಡಿ ಬಂದಿದ್ದು,ಕಥಾವಸ್ತುವನ್ನು ದಿಗ್ದರ್ಶನದ ಮೂಲಕವೇ ಜನಮನ ಸೆಳೆಯುವಂತೆ ಮಾಡಿರುವುದು ನಿಜವಾಗಿಯೂ ಶ್ಲಾಗನೀಯವೇ ಸರಿ, ಕೇವಲ ಮೂವತ್ತು ನಿಮಿಷಗಳಲ್ಲಿ ಇಡೀ ಸನ್ನಿವೇಶವನ್ನು ಹಣೆದಿದ್ದರೂ ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ದೆಯಲ್ಲಿ ಸಮಯದ ಅಭಾವದಿಂದ ಇದು ಅನಿವಾರ್ಯವಾಗಿತ್ತು.
ಮತ್ತು ಕತೆಯ ಮೂಲ ತತ್ವಕ್ಕೆ ಕೊರತೆಯಾಗದಂತೆ ಈ ನಾಟಕ ಕಲಾಭಿಮಾನಿಗಳ ಮನದಲ್ಲಿ ಅಚ್ಹೊತ್ತಿದೆ
ಮಂಗಳೂರು ವಿ.ವಿ. ಯು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಈ ನಾಟಕ ಪ್ರಥಮ ಸ್ಥಾನ ಪಡೆದಿದ್ದು,ಇತ್ತೆಚೆಗಷ್ಟೇ ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ದಕ್ಷಿಣ ಭಾರತ ವಲಯ ಯುವಜನೋತ್ಸವದಲ್ಲಿ ಭಾಗವಹಿಸಿ 27 ವಿಶ್ವವಿದ್ಯಾಲಯಗಳ ಪೈಕಿ ಪ್ರಥಮ ಸ್ಥಾನಗಳಿಸಿ,ಮುಂಬರುವ ಜನವರಿ 5ರಿಂದ 9ರವರೆಗೆ ತಿರುಪತಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಆಳ್ವಾಸ್ ತಂಡ ಈ ನಾಟಕದೊಂದಿಗೆ ಇಡೀ ದಕ್ಷಿಣ ಭಾರತವನ್ನೇ ಪ್ರತಿ ನಿಧಿಸಲಿದೆ.
ರಾಷ್ಟ್ರಮಟ್ಟದಲ್ಲಿಯೂ ಈ ತಂಡದ ಪ್ರದರ್ಶನ ಯಶಸ್ಹ್ವಿಯಾಗಲಿ ಎಂದು ನಾವೆಲ್ಲಾ ಹಾರೈಸೋಣ.
ಪ್ರತಿ ವರ್ಷವೂ ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ ನಂತಹ ವಿಶಿಷ್ಟ ಕಾರ್ಯಕ್ರಮಗಳನ್ನೂ ನೀಡುತ್ತಿರುವ ,ಶಿಕ್ಷಣದಷ್ಟೇ ಮಹತ್ವವನ್ನು ಸಾಂಸ್ಕೃತಿಕ ಚಟುವಟಿಕೆಗೂ ನೀಡುತ್ತಿರುವ ಆಳ್ವಾಸ್ ಪ್ರತಿಷ್ಟಾನದ ಅದ್ಯಕ್ಷ ಡಾ.ಎಂ.ಮೋಹನ್ ಆಳ್ವರಿಗೂ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಇವರಿಗೂ ಮನದಾಳದ ನಮನ.

Thursday, September 2, 2010

ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !






ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಲೋಕಮಾನ್ಯ ಬಾಲಗಂಗಾದರ ತಿಲಕರ ಜನ್ಮ ಸಾರ್ಥಕ್ಯಗೊಂಡ ಬಗೆ!!!! ಈ ಎಲ್ಲ ಚಿತ್ರಗಳು ಅಂತರ್ಜಾಲದಿಂದ ಕದ್ದದ್ದು !





ಮುಂಬೈ ಗಣಪತಿ!!!!!!